ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ 





ನಾಡಲಿ ನಲಿಯುವ ಮಕ್ಕಳೆ ಇಂದು 

ನುಡಿಯುವ ಕನ್ನಡ ನುಡಿಯೆ ಎಂದು


ಊರಲಿ ಹಬ್ಬದ ಕಳೆಯೆ ಬಂದು

ಎಂದಿಗೂ ಮರೆಯದ ದಿನವೇ ಒಂದು‌ 


ಬಂದಿದೆ‌ ಇಂದು ನವೆಂಬರ್ ಒಂದು

ಮೊಳಗಲಿ ರಾಜ್ಯೋತ್ಸವದ ಸಿಂಧು


ಕನ್ನಡ‌ ತಾಯಿಯ ಸೇವೆಗೆ ಇಂದು 

ಕನ್ನಡ‌ ಬಂಧು ಗಳೆಲ್ಲ ಬಂದು‌ 


ಮೆರೆಯಲಿ ಕನ್ನಡ ಕೀರ್ತಿಯ ಎಂದೂ 

ಕರುನಾಡು ಒಗ್ಗೂಡಿದ ದಿನವೆ ಇಂದು 


ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ 

ಸಿರಿಗನ್ನಡಂ ಗೆಲ್ಗೆ‌  ಸಿರಿಗನ್ನಡಂ ಬಾಳ್ಗೆ ....


ಎಂಟನೇ ಹೆಜ್ಜೆ 


ಅರಿಯದೆ ಸೋತೆ ನಿನ್ನ ಒಲವಿಗೆ ,
ಜಗವೇ ಆದೆ ನೀ ನನ್ನ ಬಾಳಿಗೆ ,
ಜಾರಿದೆ ನಾ ನಿನ್ನ ಪ್ರೀತಿಗೆ ,
ಜೊತೆಯಾದೆ ನೀ ನನ್ನ ಬಾಳಿಗೆ ।। 

ಜೇನಂತ ನುಡಿಯೋಳೆ ,
ನವಿಲಂತೆ ನಡೆಯೋಳೆ,
ಜಿಂಕೆಯಂತ ಕಣ್ಣೋಳೆ ,
ಕೊತ್ತಂಬರಿ ಜಡೆಯೋಳೆ ।। 

ನಗಿಸಲು ಚಿಟಪಟ ಮಳೆಯಂತೆ ನೀನು ,
ಮುನಿಸು ಬರಲು ಮೂತಿ ಸೊಟ್ಟಗಾಗಿಸುವ ಶುಂಠಿ ಯಂತಾಗುವೆ ಏನು ?
ಮಂದಹಾಸವೆ  ಸದಾ ನಿನ್ನ ಒಡವೆಯು ,
ಏಳು ಹೆಜ್ಜೆ ಇಟ್ಟು ಬಾಳಿಗೆ ಬಂದೆ ನೀನು ,
ಎಂಟನೆ ಹೆಜ್ಜೆಗೂ ಅದೇ ನಗೆಯ ಜೊತೆಗೆ ನಡೆಯುವೆಯೇನು ?
                            
✍ನವೀನಸ್ಪೂರ್ತಿ 








Image may contain: 1 person, sitting and motorcycle
ಸ್ವಾರಸ್ಯದ ಕತೆಗಳ ಬಣ್ಣ ಕಟ್ಟಿ ಹೇಳುತ್ತಿದ್ದ ಹುಡುಗ 
ಜೀವನವನ್ನೆ  ಬಣ್ಣ ಬಣ್ಣವಾಗಿಸಲು ಹವಣಿಸುತ್ತಿರುವ ಹುಡುಗ ।।

ಇಬ್ಬರು ಅಮ್ಮಂದಿರ ಮುದ್ದಿನ ಕೂಸು 
ಮನೆಯ ರಾಜ್ಯದ ರಾಜಕುಮಾರ 
ಹೊರಟರೆ ಹೊರಗಡೆ  ರಾಜನ ಠೀವಿ 
ನಿನಗೆ ಜೊತೆ ನೀಡುವ ನಿನ್ನ ಬಣ್ಣದ ಅಂಬಾರಿ

ಶುಭವಾಗಲಿ ಈ ಶುಭದಿನದಂದು 
ನಿನ್ನ ಹುಟ್ಟಿಗೆ ತುಂಬಿದೆ ಸಂವತ್ಸರವಿಂದು 

ಬಾಲ್ಯದ ಗೆಳೆಯನಿಗೆ
ಹುಟ್ಟು ಹಬ್ಬದ ಶುಭಾಶಯಗಳು 
ಸದಾ ಸಂತೋಷವಾಗಿರು 
ಮೇರು ಪರ್ವತವ ಮೀರುವಷ್ಟು ಸಾಧನೆ ಮೆರೆದಿರು 

                                                             ನವೀನ 




ಆ ಬದಿಯ ಮಕ್ಕಳು 


ಅಲ್ಲೊಂದು ಬೀದಿ ,  ಬೆಂಗಳೂರಿನ ಬೀದಿ ,
ಬೀದಿಯ ಆ ಬದಿಯ ಮಕ್ಕಳು ,
ದೊಡ್ಡ ಮನೆಯ ಮುಂದೆ ಆಡುತ್ತಿರುವ ಪುಟ್ಟ ಮಕ್ಕಳು ,
ದುಬಾರಿ ಗೊಂಬೆಗಳ ಬೀದಿಯಲ್ಲಿ ಚೆಲ್ಲಿ ಆಡುತ್ತಿರುವ ಮಕ್ಕಳು ,
ಮಿಣ ಮಿಣ ಹೊಳೆಯುವ ಬಟ್ಟೆ ತೊಟ್ಟಿರುವ ಮಕ್ಕಳು ।।

ಅದೇ ಬೀದಿಯ ಈ ಬದಿಯಲ್ಲೊಂದು ಗುಡಿಸಲು ,
ಆ ದೊಡ್ಡ ಮನೆಗಳ ಕಟ್ಟಲು ಬಂದವರ ಗುಡಿಸಲು ,
ಆ ಗುಡಿಸಲ ಮುಂದಿರುವ ಮಕ್ಕಳು ,
ಬೀದಿಯಲ್ಲಿ ಚೆಲ್ಲಿರುವ ವಸ್ತುಗಳಲ್ಲಿ ಆಡುತಿರುವ ಮಕ್ಕಳು ।।

ಒಂದೆ  ಬೀದಿಯ ಆ ಬದಿಯ ಮಕ್ಕಳು ,
ಅದೇ ಬೀದಿಯ ಈ ಬದಿಯ ಮಕ್ಕಳು ,
ಒಂದೇ ಬೀದಿಯಲ್ಲಿ ಹುಟ್ಟಿದರೂ ಒಂದಾಗಿ ಆಡದ ಮಕ್ಕಳು ,
ಒಂದೇ ಕಡೆ ಇದ್ದರು ಬೇರೆ ಬೇರೆಯಾಗಿ ಬೆಳೆಯುವ ಮಕ್ಕಳು ।।

ವಿಭಿನ್ನವಾಗಿ ಜೀವನ ಮಾಡುವ ಮಕ್ಕಳು ,
ಏನು ಅರಿಯದೆ ಇದ್ದರೂ ಅಂತಸ್ತಿನ ಅಡಿಪಾಯದಲ್ಲಿ ,
ಅರಿಯದೆ ಅರಳುವ ಹೂವುಗಳು ,
ನಾಳಿನ ದೇಶದ ಭವಿಷ್ಯದ ಅಡಿಗಲ್ಲುಗಳು ।।

ಈ ಬೀದಿಯ ಎರೆಡೂ ಬದಿಯಲ್ಲಿ ಆಡುವ ಅರಳುವ ಮಕ್ಕಳು ,
ಇರಲಿ ಇವರೆಲ್ಲರಿಗೂ ಸಮಾನ ಅವಕಾಶದ ಮೆಟ್ಟಿಲು ।।

                                              ನವೀನಸ್ಫೂರ್ತಿ 

ಅಳಿದು ಉಳಿದವರು (COVID ಇಂದ )

65-year old covid-19 positive man dies in Coimbatore | Covaipost

ನಿನ್ನೆ ನಾಳೆಗಳ ಅರಿವಿಲ್ಲ 
ಆಗು ಹೋಗುಗಳ ಚಿಂತೆ ಇಲ್ಲ 
ಮನೆ ಬಿಟ್ಟು ಹೋಗುವ ಹಾಗಿಲ್ಲ 
ಮನದ ಗೂಡಲ್ಲಿ ಒಂಟಿಯೊ ಒಬ್ಬಂಟಿಯೋ ತಿಳಿದಿಲ್ಲ ।। 

ಬಿಡುವಿಲ್ಲದೆ ಬದುಕಿದವರು , ಇಂದು 
ಬಿಡದೆ,  ಬಿಡುವಿನಲ್ಲಿ ಬಿದ್ದಿರುವರು  ,
 ಬದುಕಲ್ಲಿ ಸಮಯವೇ ಇಲ್ಲ ಅನ್ನುವವರು , ಇಂದು 
ಸಮಯ ಕಳೆಯುವ ಪರಿಯನ್ನು ಹುಡುಕುತಿರುವರು ।। 

ಜೀವನದಲ್ಲಿ ಏನಾದರು ಮಾಡಬೇಕು , ಎಂದವರು 
ಜೀವ ಉಳಿಸಿಕೊಳ್ಳುವುದೆ ಮುಖ್ಯವೆಂದು , ಮನೆಯಲ್ಲಿರುವರು ,
ಬಣ್ಣದ ಆಸೆ ಕಟ್ಟಿ ಊರು ಬಿಟ್ಟು ಬಂದವರು ,
ಬಿಟ್ಟು ಬಂದ ಊರಿಗೆ ಮತ್ತೆ ಮರಳುತಿರುವರು ।।


BAR' ನ ಮುಂದೆ Queue ನಿಂತವರೆ ದೊಡ್ಡವರು ,
ಮನೆಯಲ್ಲಿ ಕುಂತು NEWS ನೋಡಿದವರು ಭಯದಲ್ಲೇ ಸತ್ತರು ,
ಸಾಯುವವರ ಬದುಕಿಸಲು ಹೋರಾಡುತ್ತಿರುವ ವೈದ್ಯರೆ ದೇವರು,
ದೇವರಂತೆ ದೊಡ್ಡ POSTER ಗಳಲ್ಲಿ Pose ಕೊಡುತಿದ್ದವರು ಎಲ್ಲಿ ಹೋದರು ।।

ಮಾನವರಿಗೆ ಮಾರಿಯಾಗಿ ಬಂದದ್ದಾದರು ಏನು ?
ಬೇರೆ ಗ್ರಹದ ಜೀವಗಳಲ್ಲ ,
ಕನಸಲ್ಲೂ ಕಾಣದ ಭಯಾನಕ ರಕ್ಕಸನಲ್ಲ ... 
ಕಣ್ಣಿಗೂ ಕಾಣದ ಸಣ್ಣ ರೋಗಾಣು ।।

ಪರ್ವತವನ್ನೇ ಪುಡಿ ಪುಡಿ ಮಾಡುವೆ ಎಂದು ,
ಹೆಚ್ಚು ಮೆರೆದ ಮಾನವನಿಗೆ ಇಂದು ,
ಕಾಣದ ಸಣ್ಣ ಅಣುವಿಗೆ ಅಡಗಿ ಕೂರುವ ಗತಿಯೇನು ?
ಕೊನೆಯಿರದಷ್ಟು ಕರ್ಮಗಳ ಫಲವ ಉಂಡೇ ತೀರಬೇಕು ನಾವೆಲ್ಲರು ।।

ಸೃಷ್ಟಿಯ ಮುಂದೆ ಯಾರು ಇಲ್ಲ ,
ಅವಳು ಮುನಿದರೆ ಯಾರು ಉಳಿಯುವುದೂ ಇಲ್ಲ ,
ಅವಳ ರುದ್ರ  ತಾಂಡವದಲ್ಲಿ ಅಳಿಯದೆ ಉಳಿಯಬೇಕೆನ್ನುವವರು ,
ಈ ಭೂ ಮಾತೆಯ ಕೈ ಇಂದ ಜೀವ ಭಿಕ್ಷೆಯ ಬೇಡುತಿಹರು . 
ಅವರೇ ಅಳಿದು ಉಳಿದವರು (COVID ಇಂದ )....   


                                                        ನವೀನಸ್ಪೂರ್ತಿ 


ಭಾವಗಳ ಜಗದಲ್ಲಿ ನೋವು ಸಹಜ , ಜೀವನದಲ್ಲಿ ಹಲವು ನೋವುಗಳನ್ನು ಅನುಭವಿಸುವ ದಿಯಾ ಪಾತ್ರ .  ಈ ಕವನಕ್ಕೆ ಸ್ಪೂರ್ತಿಯಾಗಿದೆ  . An Introvert who resides in each and every one of us. who suffers a lot  and only come out when we feel a lot of pain is the person who is telling this poem. 




ಬಂಧಿಯಾದೆನು ನಾನು ನನ್ನೊಳಗೆ ,
ಹೊರಗೆ ಬರಲು ಅಳುಕು ನನಗೆ ,
ಬಂದರೆಲ್ಲಿ ಕಣ್ಣು ನೋಯುವಷ್ಟು ತೋಯುವುದೋ ,
ನಿಂದರೆಲ್ಲಿ ಮನವು ಸಾಯುವಷ್ಟು ನೋಯುವುದೋ ।।

ಭಾವಕೆ ನೀರೆರೆಯುವ ನೀನಿಲ್ಲದೆ ,
ನಾನೆಂಬುದು , ಕನ್ನಡಿಯ ಒಂದು ಬಿಂಬವಾಗಿದೆ ,
ಜೀವಕೆ ಜೇನೆರೆಯುವ ನೀನಿಲ್ಲದೆ ,
ಸಿಹಿಯಲ್ಲು ಕಹಿಯಲ್ಲು ವ್ಯತ್ಯಾಸ ಕಾಣದಾಗಿದೆ ।।

ಈ ಭಾವನೆಗಳು ಭೂತವಾಗಿವೆ ,
ಕಾಡುವ ಬದಲು ಕೆಲವೊಮ್ಮೆ ಮುದ ನೀಡಿವೆ ,
ಭೂತದಲ್ಲೆ ಬದುಕುವ ಹಂಬಲ ಮೂಡಿದೆ ,
ವಾಸ್ತವವು ಸತ್ವವಿಲ್ಲದ ಹೊರೆಯಾಗಿ ಕಂಡಿದೆ ।।

ಬದುಕಿನ ಪುಟ ತಿರುವಿದರೆ ,
ಖಾಲಿ ಹಾಳೆಯೇನೋ ಕಾದಿದೆ ,
ಆದರೆ, ಒತ್ತಿ ಬರೆದ ಅಕ್ಷರಗಳ ಗುರುತು ,
ಬಿಳಿಹಾಳೆಯಲ್ಲೂ ಮಾಸದಂತೆ ಉಳಿದಿದೆ ।।

ನೆನಪಿನ ಕಣ್ಣೀರು , ಭಾವದ ಬಿಸಿಯುಸಿರು ,
ಮರುಕಳಿಸುವ ನೋವು ,ಬರವಣಿಗೆಯನ್ನೇ ಕಟ್ಟಿ ಹಾಕಿದೆ ,
ಜೀವಕ್ಕಾಗಿ  ಜೀವನವೋ , ಜೀವನಕ್ಕಾಗಿ ಜೀವವೋ ,
ಏನೊಂದೂ ತಿಳಿಯದೆ ಮತ್ತೆ ನೊಂದಿದೆ ।।

ನೊಂದ ಸಾವಿರಾರು ಮನಗಳಿಗೆ ಈ ಗೀತೆಯ ಅರ್ಪಿಸಿದೆ ...... 


- ನವೀನಸ್ಪೂರ್ತಿ 


ಬದುಕು ಕಟ್ಟಿಕೊಳ್ಳೋಣ 

Related image

ಹೊಸ ವರ್ಷದ ಆದಿ ಇಂದು 
ಈ ಜಗದ  ಸಮಯದ ಭಾಗವೊಂದು 
ಒಂದು ವರುಷದ ಸಮಯವಿಂದು 
ಒದಗಿ ಬಂದಿದೆ ಜೀವನಕ್ಕೆಂದು ।।

ಕಟ್ಟೋಣ ಬದುಕು , ಮುಚ್ಚೋಣ ಬಿರುಕು ,
ಹುಟ್ಟಿ ಹಾಕೋಣ ಒಂದು ಹೊಸ ಹುರುಪು ,
ಜೀವನ ಪ್ರೀತಿಯ ಬೆಳೆಸೋಣ ,
ಜೀವಕೆ ಪ್ರೀತಿಯ ಕಲಿಸೋಣ ।।

365 ದಿನಗಳ ಸದ್ವಿನಿಯೋಗ ಮಾಡೋಣ ,
ಭರವಸೆಯ ಬೆಳಕಲ್ಲಿ ಇರುಳನ್ನು ಕಳೆಯೋಣ ,
ಸಾಧನೆಯ ಬೆವರಲ್ಲಿ ಬೆಳಕನ್ನು ಬೆಳಗಿಸೋಣ ,
ಇಂದಿನ ದಿನದಲ್ಲೆ ಬದುಕೋಣ ।।

ನಾವು ನಾವಾಗಲು ಪರಿತಪಿಸುವುದ ಬಿಟ್ಟು 
ನಮ್ಮತನ ಕಟ್ಟಲು ಶ್ರಮಿಸೋಣ ,
ಕಳೆದುಹೋದ ಸಮಯದ ಬಗ್ಗೆ ಕೊರಗನ್ನು ಬಿಟ್ಟು ,
ಕೈಗೆ ಸಿಕ್ಕಿರುವ ಸಮಯದಲ್ಲಿ ಸಮಾಜಮುಖಿಯಾಗಿ ಬದುಕೋಣ ।। 

     ಹೊಸ ವರ್ಷದ ಮೊದಲ ಕವನ 

                                                        ನವೀನಸ್ಫೂರ್ತಿ